Farmers Day – ನಮ್ಮ ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ ತಿಂಗಳಿನ 23 ನೇ ತಾರೀಕಿನಂದು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಭಾರತದ ಐದನೇ ಪ್ರಧಾನ ಮಂತ್ರಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥವಾಗಿ ಅವರ ಹುಟ್ಟಿದ ದಿನವನ್ನೇ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಚೌಧರಿ ಚರಣ್ ಸಿಂಗ್ ಅವರು ಮೀರತ್ ನ ನೂರ್ಪುರ್ ನಲ್ಲಿ 1902 ಡಿಸೆಂಬರ್ 23ರಂದು ಜನಿಸಿದರು, ಕೃಷಿ ಆರ್ಥಿಕತೆಯ ಮಹತ್ವದ ಬಗ್ಗೆ ಅಧ್ಯಯನ ನಡೆಸಿ, ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
ರೈತ ದಿನವನ್ನು ಆಚರಿಸಲು ಯಾವುದೇ ವಿಶೇಷ ಖರ್ಚುಗಳು ಅಥವಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ಅಗತ್ಯವಿಲ್ಲ. ನೀವು ರೈತ ದಿನವನ್ನು ವೈಯಕ್ತಿಕ ಮಟ್ಟದಿಂದ ಆರಂಭಿಸಿ ನಿಮ್ಮ ಸಾಂಸ್ಥಿಕ ಮಟ್ಟಕ್ಕನುಗುಣವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಬಹುದು.
ಉದಾಹರಣೆಗೆ, ನೀವು ರೈತ ಮಾರುಕಟ್ಟೆಗೆ ಹೋಗಿ ಶಾಪಿಂಗ್ ಮಾಡುವ ಯೋಜನೆ ರೂಪಿಸಬಹುದು. ಆದರೆ ನೀವು ಏನನ್ನು ಖರೀದಿಸುತ್ತೀರೋ ಅದರ ಉದ್ದೇಶ ಕೇವಲ ರೈತರ ಅಗತ್ಯವನ್ನು ಪೂರೈಸುವುದು ಎನ್ನುವುದನ್ನು ನೆನಪಲ್ಲಿಟ್ಟುಕೊಳ್ಳುವುದು ಮುಖ್ಯ. ರೈತರ ಕನಸುಗಳನ್ನು ನನಸುಮಾಡಲು ನೀವು ಅವರಿಗೆ ಸಹಾಯ ಮಾಡುತ್ತಿದ್ದೀರಿ ಹಾಗೂ ಈ ಮೂಲಕ ನೀವು ತಾಜಾ ಮತ್ತು ಅಗ್ಗದ ಕೆಲವು ಅಗತ್ಯ ವಸ್ತುಗಳನ್ನು ರೈತನಿಂದ ನೇರವಾಗಿ ಖರೀದಿಸುತ್ತಿದ್ದೀರಿ. ಈ ಪ್ರಕ್ರಿಯೆಯಲ್ಲಿ ಮಧ್ಯೆ ಇರುವ ಎಲ್ಲ ಏಜೆಂಟ್ ಮಾರಾಟಗಾರರನ್ನು ನಿರ್ಲಕ್ಷಿಸುವುದೇ ನೀವು ರೈತರಿಗೆ ಮಾಡುವ ಸಹಾಯವಾಗಿದೆ.
ಕಿಸಾನ್ ದಿವಾಸ್ ನಂದು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ದೇಶದ ರೈತರ ಅಭಿವೃದ್ಧಿಗೆ ಸಹಾಯಕವಾದ ಕಾರ್ಯಗಳನ್ನು ಮಾಡಿದ ನಾಯಕರನ್ನು ಗೌರವಿಸುವುದು, ಅನೇಕ ಕಾರ್ಯಾಗಾರಗಳು, ಕೃಷಿಗೆ ಸಂಬಂಧಿಸಿದ ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ಆಧುನಿಕ ಕೃಷಿಯ ಬಗ್ಗೆ ಹಾಗೂ ಮುಂಬರುವ ವಿಪತ್ತುಗಳಿಂದ ಹೇಗೆ ಪರಿಹಾರ ಕಂಡುಕೊಳ್ಳುವುದು ಎನ್ನುವ ಬಗ್ಗೆ ರೈತರಿಗೆ ವಿವರವಾದ ಮಾಹಿತಿಯನ್ನು ಒದಗಿಸಲಾಗುತ್ತದೆ. ಹಾಗೇ, ರೈತ ದಿನಾಚರಣೆಯಂದು ಕೃಷಿ ವಿಜ್ಞಾನಿಗಳು ರೈತರೊಂದಿಗೆ ಚರ್ಚೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರವನ್ನು ನೀಡುತ್ತಾರೆ.
ಈ ದಿನದಂದು ರೈತರಿಗೆ ಉತ್ತಮ ಮತ್ತು ಆಧುನಿಕ ಕೃಷಿಯ ಜ್ಞಾನವನ್ನು ನೀಡುವ ಮೂಲಕ ರೈತರನ್ನು ಆಧುನಿಕತೆಯ ಕಡೆಗೆ ಪ್ರೇರೇಪಿಸಲಾಗುತ್ತದೆ. ಕಿಸಾನ್ ದಿವಸ್ ನಂದು ರೈತರಿಗೆ ಅವರ ಹಕ್ಕುಗಳು ಮತ್ತು ಅವರಿಗೆ ನೀಡಲಾಗಿರುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಲಾಗುತ್ತದೆ. ಈ ರೀತಿಯಾಗಿ, ಪ್ರತಿ ಪ್ರಾಂತ್ಯದಲ್ಲಿಯೂ ರೈತರ ದಿನವನ್ನು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗುತ್ತದೆ.
ರಾಮನಗರ ಜಿಲ್ಲೆಯಲ್ಲಿ ವಿದ್ಯಾನಿಧಿ ಯೋಜನೆಯ ಲಾಭ ಪಡೆದ 12,526 ರೈತರ ಮಕ್ಕಳು
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ