Rabi crop : ಭಾರತ: ರಾಬಿ ಬೆಳೆ ಬಿತ್ತನೆಯಲ್ಲಿ ಹೆಚ್ಚಳವಾಗಿರೋ ಕಾರಣ ಆರ್ಥಿಕತೆ ಸುಧಾರಣೆ: ಆರ್ ಬಿಐ
ರಾಬಿ ಬೆಳೆ : ಭಾರತದಲ್ಲಿ ಕೃಷಿ ವಲಯ ಸುಧಾರಣೆ ಕಾಣುತ್ತಿದ್ದು, ಚಳಿಗಾಲ ಎಂದರೆ ರಾಬಿ ಋತುವಿನ ಆರಂಭದಲ್ಲಿಯೇ ಬಿತ್ತನೆಯು ವೇಗ ಪಡೆದುಕೊಂಡಿತು. ಡಿಸೆಂಬರ್ 2 ನೇ ತಾರೀಕಿನವರೆಗೆ ದೇಶದಲ್ಲಿ ಬಿತ್ತನೆಯು ಸಾಮಾನ್ಯ ಪ್ರಮಾಣಕ್ಕಿಂತ 6.8% ನಷ್ಟು ಹೆಚ್ಚಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿರುವ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಹಿಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ರಾಬಿ ಪ್ರಮುಖ ಬೆಳೆಗಳಾದ ಗೋಧಿ, ಬಾರ್ಲಿ, ಸಾಸುವೆ, ಕಡಲೆ ಹಾಗೂ ಅಗಸೆ ಬಿತ್ತನೆ ಶುರುವಾಗುತ್ತದೆ. ಈ ಪೈಕಿ ದೇಶದಲ್ಲಿ ಪ್ರಸ್ತುತ ರಾಬಿ ಹಂಗಾಮಿನಲ್ಲಿ ಮೊದಲ ಎರಡು ತಿಂಗಳಲ್ಲಿಯೇ ಇದುವರೆಗೂ ಗೋಧಿ ಬಿತ್ತನೆ ಹೆಚ್ಚಾಗಿದೆ. ಈ ವರ್ಷ ಗೋಧಿ ಬಿತ್ತನೆ 5.36% ರಷ್ಟು ಏರಿಕೆಯಾಗಿದ್ದು, ಕೃಷಿ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಇದುವರೆಗೆ 211.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಧಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ರಾಜಸ್ಥಾನ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಅಗ್ರಸ್ಥಾನದಲ್ಲಿವೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.
ಆರಂಭದಲ್ಲಿ ಉತ್ತಮವಾಗಿ ದೇಶದ ಖಾರಿಫ್ ಋತುವಿನಲ್ಲಿ ಕೃಷಿ ಉತ್ಪಾದನೆಯು ಮಳೆ, ಹವಾಮಾನ ವೈಪರಿತ್ಯಗಳ ಕಾರಣದಿಂದ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಕೃಷಿ ಸಚಿವಾಲಯದ ಸಮೀಕ್ಷೆಯ ಅಂದಾಜಿನ ಪ್ರಕಾರ, ಭಾರತದ ಒಟ್ಟು ಖಾರಿಫ್ ಬೆಳೆ ಉತ್ಪಾದನೆಯು ಕಳೆದ ವರ್ಷ ಇದ್ದ 156.04 ಮಿಲಿಯನ್ ಮೆಟ್ರಿಕ್ ಟನ್ ನಿಂದ 149.92 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ಇಳಿಕೆಯಾಗಿದೆ ಎಂದರು.
ಪ್ರಮುಖ ರಾಬಿ ಬೆಳೆಯಾದ ಗೋಧಿಯ ಬಿತ್ತನೆ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದ, ನಂತರ ಮುಂದಿನ ವರ್ಷ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ. ಈ ಋತುವಿನಲ್ಲಿ ಗೋಧಿ, ಅಕ್ಕಿ ಹಾಗೂ ದ್ವಿದಳ ಧಾನ್ಯಗಳಲ್ಲದೆ, ಉದ್ದಿನ ಬೇಳೆ ಹಾಗೂ ಕಡಲೆಕಾಯಿ ಮತ್ತು ಸಾಸಿವೆ ಮುಂತಾದ ಎಣ್ಣೆಕಾಳುಗಳನ್ನು ಕೂಡ ಬೆಳೆಯಲಾಗುತ್ತದೆ.
ಉತ್ತಮವಾಗಿರುವ ರಾಬಿ ಬೆಳೆ ಬಿತ್ತನೆಯಿಂದ ಅಧಿಕ ಇಳುವರಿ ಸಿಗಲಿದ್ದು, ಅದರಿಂದ ಬೇಡಿಕೆಯಷ್ಟು ಪೂರೈಕೆ, ರೈತರ ಮತ್ತು ದೇಶದ ಕೃಷಿ ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಕಂಡು ಬಂದ ಹಣ್ಣದುಬ್ಬರದ ಪರಿಸ್ಥಿತಿಯು 2023-24ವರ್ಷದ ಮೊದಲ ತ್ರೈಮಾಸಿಕದ ಸಮಯದ ಹೊತ್ತಿಗೆ ಸರಾಗವಾಗಲಿದೆ. ಇದೇ ವರ್ಷದ ಮಧ್ಯದ ತ್ರೈಮಾಸಿಕದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹಣಕಾಸು ಮಾರುಕಟ್ಟೆಯ ಅಸ್ತಿರತೆ ಮತ್ತು ಇನ್ನಿತರ ಕಾರಣಗಳಿಂದ ಹಣದುಬ್ಬರದಲ್ಲಿ ಸ್ಥಿರತೆ ಕಂಡು ಬರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
2022-23ರ ಸಮೀಕ್ಷೆಗಳ ಪ್ರಕಾರ, 2023-24ರ ಮೊದಲ ಅರ್ಧ ವರ್ಷದಲ್ಲಿ ಎಂದರೆ ಜನವರಿಯಿಂದ ಜೂನ್‌ವರೆಗೆ ಕೃಷಿ ಮಾತ್ರವಲ್ಲದೇ ಇನ್ನಿತರ ಉತ್ಪಾದನಾ ಕಂಪನಿಗಳ ಗ್ರಾಹಕರ ವಿಶ್ವಾಸವೂ ಹೆಚ್ಚಲಿದೆ. ಉತ್ಪಾದನೆ ಜೊತೆಗೆ ಮೂಲಸೌಕರ್ಯ ವಲಯದ ಸಂಸ್ಥೆಗಳ ವಹಿವಾಟಿನಲ್ಲಿಯೂ ಸುಧಾರಣೆ ಕಾಣಲಿದೆ. ಆದರೆ, ಜಾಗತಿಕ ಆರ್ಥಿಕ ಸ್ಥಿತಿಗತಿಗಳ ಪರಿಣಾಮದಿಂದ ಕೆಲವು ಋಣಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗೆ,ಈ ಎಲ್ಲಾ ಅಂಶಗಳು 2023-2024ನೇ ಸಾಲಿನಲ್ಲಿ ಒಟ್ಟು ದೇಶಿಯ ಉತ್ಪನ್ನ ಎಂದರೆ ಜಿಡಿಪಿ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.
ರಾಯಚೂರು ಕೃಷಿ ಮಾರುಕಟ್ಟೆ: ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮೂಲಸೌಕರ್ಯಗಳ ತೊಂದರೆ ಕುರಿತು ರೈತರ ಆಕ್ರೋಶ.
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ