ಭಾರತದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದ್ದರೂ, ಕರ್ನಾಟಕದಲ್ಲಿ ಕೊಂಚ ಇಳಿಕೆಯಾಗಿದೆ.
ಅಕ್ಟೋಬರ್ ಹಾಗೂ ನವೆಂಬರ್ ಅವಧಿಯಲ್ಲಿ ಭಾರತದ ಸಕ್ಕರೆ ಉತ್ಪಾದನೆಯು 47.9 ಲಕ್ಷ ಟನ್‌ಗಳಷ್ಟು ಹೆಚ್ಚಾಗಿದೆ ಎಂದು ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ (ಐಎಸ್‌ಎಂಎ)ಮಾಹಿತಿ ನೀಡಿದೆ.
ಪ್ರಸ್ತುತ 2022 ಹಾಗೂ 2023 ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ ಕಳೆದ ನವೆಂಬರ್ 30 ರವರೆಗೆ ಸಕ್ಕರೆ ಉತ್ಪಾದನೆಯು 47.9 ಲಕ್ಷ ಟನ್ ನಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಕ್ಕರೆ ಉತ್ಪಾದನೆ 47.2 ಲಕ್ಷ ಟನ್‌ಗಳಷ್ಟಿತ್ತು. ಹಾಗಾಗಿ ಈ ವರ್ಷ ಉತ್ಪಾದನೆಯಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ನೀಡಿದ ವರದಿ ತಿಳಿಸಿದೆ.
ಈ ವರ್ಷ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಸಂಖ್ಯೆ 434 ರಷ್ಟಿದ್ದು, ಕಳೆದ ವರ್ಷ ಕೇವಲ 416ರಷ್ಟು ಕಾರ್ಖಾನೆಗಳು ಕಬ್ಬನ್ನು ಸಕ್ಕರೆಯನ್ನಾಗಿ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದವು. ಸಮಗ್ರವಾಗಿ ನೋಡುವುದಾದರೆ, ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆಯು 2022-23ರ ಮೊದಲ ಎರಡು ತಿಂಗಳ ಅವಧಿಯಲ್ಲಿ 20 ಲಕ್ಷ ಟನ್‌ಗಳಷ್ಟಿದ್ದರೆ, ಈ ಹಿಂದಿನ ವರ್ಷದ ಅವಧಿಯಲ್ಲಿ 20.3 ಲಕ್ಷ ಟನ್‌ಗಳಷ್ಟಿತ್ತು. ಇನ್ನು ಉತ್ತರ ಪ್ರದೇಶದಲ್ಲಿ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ಸಕ್ಕರೆ ಉತ್ಪಾದನೆಯು 10.4 ಲಕ್ಷ ಟನ್‌ಗಳಿಂದ 11.2 ಲಕ್ಷ ಟನ್‌ಗಳಿಗೆ ಹೆಚ್ಚಾಗಿದೆ.
ಆದರೆ ಕರ್ನಾಟಕದಲ್ಲಿ ಮಾತ್ರ ಸಕ್ಕರೆ ಉತ್ಪಾದನೆಯು 12.8 ಲಕ್ಷ ಟನ್‌ಗಳಿಂದ 12.1 ಲಕ್ಷ ಟನ್ ನಷ್ಟು ಇಳಿಕೆ ಕಂಡಿದ್ದು, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಕೊಂಚ ಕಡಿಮೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಇದುವರೆಗೆ ಎಥೆನಾಲ್ ಪೂರೈಕೆಗೆ, 2022-23 ನೇ ವರ್ಷದಲ್ಲಿ ಸುಮಾರು 460 ಕೋಟಿ ಲೀಟರ್ ಎಥೆನಾಲ್ ಪೂರೈಕೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಎಥೆನಾಲ್ ಉತ್ಪಾದನೆ, ಪೂರೈಕೆ ಅವಧಿಯು ಡಿಸೆಂಬವರೆಗೆ ಕಂಡು ಬರುತ್ತದೆ.
ಈಗಾಗಲೇ ತೈಲ ಮಾರುಕಟ್ಟೆ ಕಂಪನಿಗಳು ಹೆಚ್ಚುವರಿ 139 ಕೋಟಿ ಲೀಟರ್‌ಗಳ ಎಥೆನಾಲ್ ಅವಶ್ಯಕತೆ ಇದೆ ಎಂದು ಕೇಳಿಕೊಂಡಿದ್ದು, ಈ ಕುರಿತು ಅಸೋಸಿಯೇಶನ್ ಮುಂದೆ ಬೇಡಿ ಇಟ್ಟಿತ್ತು. ಹಾಗಾಗಿ, ಎಥೆನಾಲ್ ಹಂಚಿಕೆ ಕುರಿತು ಹಾಗೂ ಪ್ರಸ್ತುತ ಬಿಡ್‌ಗಳನ್ನು ಪರಿಶೀಲಿಸಲು ಕ್ರಮ ಕೈಗೊಳ್ಳುವುದಾಗಿ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ (ಐಎಸ್‌ಎಂಎ) ತಿಳಿಸಿದೆ.
ಭಾರತ: ರಾಬಿ ಬೆಳೆ ಬಿತ್ತನೆಯಲ್ಲಿ ಹೆಚ್ಚಳವಾಗಿರೋ ಕಾರಣ ಆರ್ಥಿಕತೆ ಸುಧಾರಣೆ: ಆರ್ ಬಿಐ
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ